Chief Editor
Manohar. R (Manu)
Photo Journalist
chitrataramanu@gmail.com
+91 9845549026
ಧೂಮಂ ಹೊಗೆಯ ಹಿಂದಿರುವ ಕರಾಳಮುಖಗಳು - 3.5/5 ****
Posted date: 24 Sat, Jun 2023 08:36:29 AM
ಚಿತ್ರ : ಧೂಮಂ
ನಿರ್ಮಾಣ : ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು, 
ನಿರ್ದೇಶನ : ಪವನ್‌ಕುಮಾರ್ 
ಛಾಯಾಗ್ರಹಣ : ಪ್ರೀತಾ ಜಯರಾಮನ್ 
ಸಂಗೀತ : ಪೂರ್ಣಚಂದ್ರ ತೇಜಸ್ವಿ 
ಕಲಾವಿದರು:   ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ರೋಷನ್ ಮ್ಯಾಥ್ಯೂ, ಅಚ್ಯುತ್ ಕುಮಾರ್. ವಿನೀತಾ  ರಾಧಾಕೃಷ್ಣನ್,  ಅನು ಮೋಹನ್  ಹಾಗೂ ಇತರರು.  

ಸಿಗರೇಟ್ ಸೇವನೆಯಿಂದ ಆಗುವ ದುಷ್ಪರಿಣಾಮಗಳು,  ಸೇಲ್ಸ್ ಹೆಚ್ಚಿಸಿಕೊಳ್ಳಲು ಸಿಗರೇಟ್ ತಯಾರಿಕಾ ಕಂಪನಿಗಳು ಜನರನ್ನು ಹೇಗೆ ಮರುಳುಗೊಳಿಸುತ್ತವೆ,
 
ನಂಬಿಕೆ ಹುಟ್ಟುವಂತೆ ಮೋಡಿ ಮಾಡುವ  ಮಾರ್ಕೆಟಿಂಗ್ ಜಾಲ ಇದೆಲ್ಲವನ್ನೂ ಇಟ್ಟುಕೊಂಡು ಸಿಗರೇಟ್ ಮಾಫಿಯಾ ಎಷ್ಟು ವ್ಯಾಪಕವಾಗಿ ಹರಡಿದೆ ಎಂಬುದನ್ನು ಹೇಳುವ ಚಿತ್ರವೇ ಧೂಮಂ. ಪವನ್‌ಕುಮಾರ್  ನಿರ್ದೇಶಕನಾಗುವ ಮುನ್ನವೇ ಹೆಣೆದಿದ್ದ ಕಥೆಯನ್ನು ಈಗ ತೆರೆಯಮೇಲೆ ತಂದಿದ್ದಾರೆ.  ಈ ಚಿತ್ರದಲ್ಲಿ  ಧೂಮಪಾನದಿಂದಾಗುವ ಪರಿಣಾಮಗಳ ಬಗ್ಗೆ ಕಥೆ ಮಾಡಲಾಗಿದೆ. ಕೆಲಸವನ್ನರಸಿ ಬೆಂಗಳೂರಿಗೆ ಬರುವ  ನಾಯಕ ಅವಿನಾಶ್ ( ಫಹಾದ್ ಫಾಸಿಲ್)  ಚಾಟ್ ಸೆಂಟರ್‌ವೊಂದನ್ನು ಆರಂಭಿಸುತ್ತಾನೆ. ಇಲ್ಲಿ ಆತನಿಗೆ  ದಿಯಾ(ಅಪರ್ಣ ಬಾಲಮುರಳಿ) ಹಾಗೂ ಸಿದ್ದಾರ್ಥ್( ರೋಷನ್ ಮ್ಯಾಥ್ಯೂ) ಸ್ನೇಹಿತರಾಗುತ್ತಾರೆ.  ಈ ಪರಿಚಯ ಒಂದೆಡೆ ಪ್ರೇಮವನ್ನು ಬೆಳೆಸಿದ್ರೆ, ಮತ್ತೊಂದು ಕೆಲಸ ರೂಪಿಸುತ್ತೆ. ಸಿಗರೇಟ್ ಕಂಪನಿಯ ಮಾಲೀಕ ಸಿದಾರ್ಥ್ ತನ್ನ  ಕಂಪನಿಯಲ್ಲಿ  ಅವಿನಾಶ್ ಗೆ  ಸೇಲ್ಸ್ ಮ್ಯಾಮೇಜರ್ ಆಗಿ ನೇಮಿಸಿಕೊಳ್ಳುತ್ತಾನೆ. ಬಳಿಕ  ತನ್ನಲ್ಲಿದ್ದ  ಐಡಿಯಾಗಳನ್ನು ಬಳಸಿ  ಸಿಗರೇಟ್ ಮಾರಾಟದ ಪ್ರಮಾಣವನ್ನು ಹೆಚ್ಚಳ ಮಾಡಿ ಕಂಪನಿಗೆ ಲಾಭ ತಂದುಕೊಡ್ತಾನೆ. ಇದರಿಂದ  ಸಿದ್ದಾರ್ಥ ಗೆ ಲಾಭದ ಜೊತೆಗೆ  ಒಳ್ಳೆಯ ಹೆಸರು ಎರಡೂ ಬರುತ್ತದೆ.  ತನಗೆ ದಕ್ಕಬೇಕಿದ್ದ ಮಾಲೀಕತ್ವ, ಅಣ್ಣನ ಮಗ ಸಿದ್ ಪಾಲಾಯಿತಲ್ಲ ಎಂದು  ಆತನ ಚಿಕ್ಕಪ್ಪ ಸಂಚು ರೂಪಿಸುತ್ತಾನೆ. ಹೀಗೆ ತನಗೇ ತಿಳಿಯದ ಹಾಗೆ  ಅವಿನಾಶ್, ಸಿದ್ದಾರ್ಥನ ಚಿಕ್ಕಪ್ಪನ ಪಾಲಿನ  ವಿಲನ್ ಆಗಿಬಿಡುತ್ತಾನೆ.  ಇದೇ ಕಾರಣಕ್ಕೆ  ಆತ ಅವಿನಾಶ್‌ ಕೊಲೆಗೆ ಸುಪಾರಿ ಕೊಟ್ಟು ಕಳಿಸುತ್ತಾನೆ.  ಅದೇ ಸಮಯಕ್ಕೆ  ಅವಿನಾಶ್ ಕೊಲೆ ಪ್ರಯತ್ನವೂ ನಡೆಯುತ್ತದೆ.  ಆದರೆ ಆ ಕೊಲೆಗೂ ಸಿದ್ ಚಿಕ್ಕಪ್ಪನಿಗೂ   ಸಂಬಧ ಇರುವುದಿಲ್ಲ. ಹಾಗಾದರೆ  ಅವಿನಾಶ್‌ ಕೊಲ್ಲಲು ಸ್ಕೆಚ್  ಹಾಕಿದ್ದು ಯಾರು, ಕೋಟಿಗಟ್ಟಲೆ  ಹಣಕ್ಕೆ  ಬೇಡಿಕೆ ಇಟ್ಟದ್ದು ಯಾರು ಎಂಬ ಪ್ರಶ್ನೆಗಳು ಪ್ರೇಕ್ಷಕರನಲ್ಲಿ  ಹುಟ್ಟಿಕೊಳ್ಳುತ್ತವೆ. ಇದೆಲ್ಲದರ ಹಿಂದೆ ಯಾರ ಕೈವಾಡವಿರಬಹುದು  ಎಂದು  ಪ್ರೇಕ್ಷಕರ ಯೋಚಿಸುತ್ತಿರುವಾಗಲೇ  ಸಿಕ್ರೇಟ್ ಓಪನ್ ಆಗಿಬಿಡುತ್ತದೆ. ಹೀಗೆ  ಸಸ್ಪೆನ್ಸ್ , ಥ್ರಿಲ್ಲರ್ ಜಾನರ್ ನಲ್ಲಿ ಸಾಗುವ  ಕಂಟೆಂಟ್  ಚೆನ್ನಾಗಿದೆ. ಧೂಮಪಾನಿಗಳಿಗೆ ಒಳ್ಳೆಯ ಸಂದೇಶ ಹೇಳಲಾಗಿದೆ. ನಾಯಕ ಫಹಾದ್ ಫಾಸಿಲ್  ಅವಿನಾಶ್ ಪಾತ್ರದಲ್ಲಿ  ಉತ್ತಮ ಅಭಿನಯ ನೀಡಿದ್ದಾರೆ.  ತನ್ನ ನಟನೆಯ ಮೂಲಕ  ಪಾತ್ರಕ್ಕೆ ಜೀವ ತುಂಬಿದ್ದಾರೆ.  ನಾಯಕಿ ಅಪರ್ಣ ಬಾಲಮುರಳಿ  ಕೂಡ ದಿಯಾಳ ಪಾತ್ರ ನೈಜವಾಗಿ ಬರುವಂತೆ ಅಭಿನಯಿಸಿದ್ದಾರೆ. ಉಳಿದಂತೆ ರೋಷನ್ ಮ್ಯಾಥ್ಯೂ, ಅಚ್ಯುತ್ ಕುಮಾರ್ ಸೇರಿದಂತೆ ಎಲ್ಲರೂ   ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಶೇಷವಾಗಿ ಇದು ಮೂಲತ:  ಮಲಯಾಳಂ  ಚಿತ್ರವೇ ಆಗಿದ್ದರೂ  ಸಹ  ನಿರ್ದೇಶಕರು ಡೈಲಾಗ್ ಡಿಲವರಿಯಲ್ಲಿ  ಭಾಷೆಯಲ್ಲಿ ಹಿಡಿತ ಸಾಸಿದ್ದಾರೆ.  ಕನ್ನಡ ಡಬ್ಬಿಂಗ್ ವರ್ಷನ್ ಅಚ್ಚುಕಟ್ಟಾಗಿದೆ. ಕನ್ನಡ ಚಿತ್ರವನ್ನೇ ನೋಡುತ್ತಿರುವ  ಅನುಭವ ಪ್ರೇಕ್ಷಕನಿಗಾಗುತ್ತದೆ.  ಚಿತ್ರದ ಒಂದು ಹಾಡು, ಬಿಜಿಎಂ, ಛಾಯಾಗ್ರಹಣ ಹಾಗೂ ಎಡಿಟಿಂಗ್  ಚೆನ್ನಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಧೂಮಂ ಹೊಗೆಯ ಹಿಂದಿರುವ ಕರಾಳಮುಖಗಳು - 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.